Premakke Kannilla song lyrics are sung by Pancham Jeeva and Shreya Iyer from Sakath. Premakke Kannilla Romantic soundtrack was composed by Judah Sandhy with lyrics written by Jayanth Kaikini.
Premakke Kannilla Song Lyrics in Kannada:
ಹೃದಯವ ಕಳೆಯುವ
ಹಸಿಬಿಸಿ ಅನುಭವ
ಒಂಚೂರು ಸ್ಪರ್ಶ ಒಂಚೂರು ಊಹೆ
ಒಂಚೂರು ಗಂಧ
ಒಂಚೂರೆ ಮಾಯೆ
ಮುದ್ದಾಗಿ ಸೇರಿ
ನನ್ನಲ್ಲಿ ಹೀಗೊಂದು
ಜಾದು ತುಂಬಾ ಜೋರು
ಪ್ರೇಮಕ್ಕೆ ಕಣ್ಣಿಲ್ಲಾ ಅಂತ
ಅಂದೋರ್ ಯಾರು
ಹೃದಯವ ಕಳೆಯುವ
ಹಸಿಬಿಸಿ ಅನುಭವ
ಅಡಗಲೆಂದೆ ಎದೆಗೂಡಲ್ಲಿ
ಇದೆ ಜಾಗ ಖಾಸಾ
ಅಳಿಸದಂತ ಸ್ವರಗಳಿಂದ
ಬರದ ರೂಪ ವಿನ್ಯಾಸ
ನನಗಂತೂನೀನು
ಎಂದು ಕೂಡ ಎಂದಿಗಿಂತ ಚೆಂದ
ಎಲ್ಲೆಲ್ಲೂ ಹೊನ್ನಾರ ಜಾತ್ರೆ
ನಿಂದೆ ಕೇಳು
ಪ್ರೇಮಕ್ಕೆ ಕಣ್ಣಿಲ್ಲಾ ಅಂತ
ಅಂದೋರ್ ಯಾರು
ಹಿತವೇ ಬೇರೆ ಸನಿಹ ನೀನು
ಇರುವಷ್ಟು ಹೊತ್ತು
ಬೆಳಕೆ ಹೋದ ಊರಿಗೀಗ
ಮರಳಿದಂತೆ ವಿದ್ಯುತು
ಕಿವಿಗೊಟ್ಟು.ಊ.ನೀ ಕೇಳು
ಪ್ರೀತಿಯಲಿ ಬೀಳುವಂತ ಸದ್ದು
ಹೃದಯವ ಕಡೆಯುವ
ಕಲೆಯನು ಕಳಿಯುವ
ಒಂಚೂರು ಸ್ಪರ್ಶ ಒಂಚೂರೆ ಊಹೆ
ಒಂಚೂರು ಗಂಧ ಒಂಚೂರೆ ಮಾಯೆ
ತಂತಾನೆ ಸೇರಿ
ಅಂದೆಯ ಮೇಲೀಗ
ನೀನು ಮೆಲ್ಲಗೇರು
ಪ್ರೇಮಕ್ಕೆ ಕಣ್ಣಿಲ್ಲಾ ಅಂತ
ಅಂದೋರ್ ಯಾರು
Also Read: Giccha Gili Gili Song Lyrics