Ninnannu Nodaliga song lyrics in Kannada from the Shokiwala is a romantic action entertainer movie directed by Jocky B and produced by T R Chandrasekhar. The movie cast includes Krishna Ajai Rao and Sanjana Anand are in the lead roles while Shridhar V Sambhram scored the music.
Ninnannu Nodaliga Song Lyrics in Kannada
ನಿನ್ನನ್ನು ನೋಡಲೀಗ
ಈ ಕಣ್ಣು ಸಾಲದು
ಯಾರಲ್ಲೂ ಹೇಳಬೇಡ
ಈ ಜೀವ ನಿನ್ನದು
ಮುದ್ದಾದ ಆಸೆಗೀಗ
ಆಕಾರ ಮೂಡಿದೆ
ನಾ ನಿನ್ನ ಅರ್ಜಿಯನ್ನು
ಸ್ವೀಕಾರ ಮಾಡಿದೆ
ಚೆಲುವಿನ ಸಂತೆಯಲ್ಲಿಯೂ
ಸೆಳೆಯುವ ಕಾಂತಿ ನಿನ್ನದು
ನಿನ್ನ ಮಂದಹಾಸದ
ಬೆಳಕಿನ ಹೂವು ಮಾಸದು
ಪ್ರತಿಸಲ ನೋಡಿದಾಗಲೂ
ಬೆಳೆಯುವ ಮೋಹ ನನ್ನದು
ಒಂದೇ ಮಾತಿನಲ್ಲಿಯೇ
ಒಲವನು ಹೇಳಲಾಗದು
ಮತ್ತೆ ಮತ್ತೆ ಓಲೈಸಿ
ಕಾಡುವಂತ ಆರಾಧಕ
ನಿನ್ನ ಕಾಳಜಿ
ತುಂಬಾ ಮೋಹಕ
ನೋಡು ನೋಡುತ್ತಿದ್ದಂತೆ
ಆಗಿಹೋಯ್ತು ಒಪ್ಪಂದ
ಪ್ರೀತಿಯಾದ ಮೇಲೆ
ಎಲ್ಲ ಎಂದಿಗಿಂತ ಚಂದಾ
ಮುಖತಹ ಮಾತನಾಡಲು
ವಿಷಯವು ಸಾವಿರಾರಿದೆ
ಏಕೋ ಕಂಡ ಕೂಡಲೇ
ವಿನಿಮಯ ಸಾಗಾದಾಗಿದೆ
ಹಸಿಹಸಿ ಗೋಡೆಯಲ್ಲಿಯೂ
ಹೆಸರನು ಗೀಚಿ ಆಗಿದೆ
ನಿನ್ನ ಕಂಡ ಜಾಗವು
ಸ್ಮರಣಿಕೆಯಾಗಿ ಹೋಗಿದೆ
ನಿನ್ನ ಕಣ್ಣ ಗಾಳಕ್ಕೆ
ಸಿಕ್ಕ ಮೀನು ನಾನಾದೆನು
ಜಾಸ್ತಿ ದೂರವ ತಾಳಲಾರೆನು
ಜೀವದಲ್ಲಿ ಬಂತೀಗ
ಮಿಂಚಿನಂತೆ ಉತ್ಸಾಹ
ಒಂದು ಸಣ್ಣ ಸ್ಪರ್ಶಕಾಗಿ
ಭಾವಪೂರ್ಣ ದಾಹ
ಪರಿಚವನ್ನೇ ಕೇಳದೆ
ಹರೆಯವು ದಾಳಿ ಮಾಡಿದೆ
ನನ್ನ ಎಲ್ಲ ಬೇಸರ
ಮರೆಯುವ ಹಾಗೆ ಆಗಿದೆ
ಹೃದಯದ ಹಾದಿಯಲ್ಲಿಯ
ತಿರುವಲಿ ನೀನು ಮೂಡಿದೆ
ಅಂದವಾದ ನಾಳೆಯ
ಭರವಸೆಯನ್ನು ನೀಡಿದೆ
ನಿನ್ನನ್ನು ನೋಡಲೀಗ
ಈ ಕಣ್ಣು ಸಾಲದು
ಯಾರಲ್ಲೂ ಹೇಳಬೇಡ
ಈ ಜೀವ ನಿನ್ನದು
ಮುದ್ದಾದ ಆಸೆಗೀಗ
ಆಕಾರ ಮೂಡಿದೆ
ನೀ ನಿನ್ನ ಅರ್ಜಿಯನ್ನು
ಸ್ವೀಕಾರ ಮಾಡಿದೆ
Also Read: Toofan Song Lyrics