Ondu Maamara Song From Naanu Nanna Kanasu Movie. This Song is Sung By Kailash Kher. lyrics and Music Given by Hamsalekha.Naanu Nanna Kanasu is a Kannada film.Directed by Prakash Jaj.This is remake of Tamil film Abhiyum Naanum.Produced by Prakas Raj.Starring Prakash Raj,Amoolya.
Ondu Maamara Song Lyrics In Kannada
ಒಂದು ಮಾಮರಾ, ಮಾಮರದಗೊಂದು ಗುಬ್ಬೀ ಗೂಡು
ಗುಬ್ಬಿ ಗೂಡಾಗ ಮೂರೊತ್ತು ಕೇಳುತಿತ್ತು ಹಾಡು
ಬಾನಿನಂತೊಂದು ಗುಬ್ಬಿ, ಭೂಮಿಯಂತೊಂದು ಗುಬ್ಬಿ
ಕೂಡಿ ಆಯಿತಮ್ಮ ಹೂವಿನಂತೊಂದು ಗುಬ್ಬಿ
ಆ ಆ ಕೇಳಿರಿ ಮೂರೂ ಗುಬ್ಬಿಯ ಲಾಹಿರೀ…
ಆ ಆ ಕೇಳಿರಿ ಮೂರೂ ಗುಬ್ಬಿಯ ಲಾಹಿರೀ…
ಸಿಸಿಸಿಸಿ ಗಿರಿ ರಿಸ ಸಿನಿ ರಿಸ ಸಿನಿ ನಿಸಿ ದಿಸ ದಿನಿಪಿ
ಅದು ಸರಿಗಮಪದನಿಸ ರೀ
ಚಿವ್ ಚಿವ ಚಿವ್ ಚಿವ ಚಿವ್ ಚಿವ ಗುಬ್ಬಿ ಗೂಡಲಿ ಚಿವ್ ಚಿವ್ವ
ಚಿವ್ ಚಿವ ಚಿವ್ ಚಿವ ಚಿವ್ ಚಿವ ಗುಬ್ಬಿ ಗೂಡಲಿ ಚಿವ್ ಚಿವ್ವ
ಇವರಿದರಲ್ರೀ ಬಾನಿನತೊಂದು ಗುಬ್ಬಿ, ಇವರ ಪ್ರೀತಿ ಎಂತದು ಹೇಳ್ಲಿ
ಬಾನಿಗೆ ಒಂದು ರೂಪಿಲ್ಲ, ಮುಟ್ಟಿ ನೋಡಕ ಆಗೋಲ್ಲ
ಅದಕ್ಕೂ ಒಂದು ಮನಸೈತಿ, ಪಾಪ ಅದಕ ತಿಳಿದಿಲ್ಲ
ಅದರ ಪ್ರೀತಿ ಹೆಂಗಂದ್ರ.
ಧಡ್ ಧಡ ಅಂತ ಗುಡುಗೋದು. ಧಡ್ ಧಡ ಅಂತ ಗುಡುಗೋದು
ಫಳ್ ಫಳ ಅಂತ ಮಿಂಚೋದು.! ಫಳ್ಳನೆಂದು ಸುರಿಯೋದು
ಆಕಾಶದಗಲ ಈ ತಂದಿಯ ಹೃದಯ ಅತಿವೃಷ್ಠಿ ಮಾಡಿ ಕಾಪಾಡುತೈತೆ ಮನೆಯ
ಆ ಆ ಕೇಳಿರಿ ಬಾನಿನ ಪ್ರೀತಿಯ ಲಾಹಿರಿ…
ಆ ಆ ಕೇಳಿರಿ ಬಾನಿನ ಪ್ರೀತಿಯ ಲಾಹಿರಿ…
ಇವರು ಅನುಭಿನು ಮಾನುನಾನು ಅನುಭಿನು ಮಾನುನಾನು ಕೆನುಯಾನು ಜಾನು ಮಾನುನಾ
ಇವರು ಮಾನಕೆ…! ಇವರು ಮಾನಕೆ.! ಅಭಿಮಾನಕೆ ಯಜಮಾನಾss
ಚಿವ್ ಚಿವ ಚಿವ್ ಚಿವ ಚಿವ್ ಚಿವ ಗುಬ್ಬಿ ಗೂಡಲಿ ಚಿವ್ ಚಿವ್ವ
ಚಿವ್ ಚಿವ ಚಿವ್ ಚಿವ ಚಿವ್ ಚಿವ ಗುಬ್ಬಿ ಗೂಡಲಿ ಚಿವ್ ಚಿವ್ವ
ಇಕಿ ಇದಾಳಲ್ರೀ ಭೂಮಿಯಂತೊಂದು ಗುಬ್ಬಿ, ಇಕಿ ಮಾತು ಎಂತದ್ದು ಹೇಳ್ಲಿ
ತಿರುಗೋ ಭೂಮಿ ಜಗದಮ್ಮ, ಕರಗೋ ಭೂಮಿ ನಮ್ಮಮ್ಮ
ಅಕಿನೋ ಜ್ವಾಲಾಮುಖಿ, ಇಕಿನೋ ಅಂತರ್ಮುಖಿ
ಅಕಿಯ ಕ್ವಾಪ ಭೂಕಂಪ, ಇಕೀಯದೊ ಬರಿ ಅನುಕಂಪ
ಆಕಿ ಕ್ಷಮಯಾ ಧರಿತ್ರಿ, ಇಕಿ ಸಹನೆಯ ಗಾಯತ್ರಿ
ಆ ಭೂಮಿದೇನೋ ಬದಲಾಗೋ ಋತು, ಈ ತಾಯಿದೇನೋ ಬದಲಾಗದ ಮಾತು
ಆ ಆ ಕೇಳಿರಿ ಭೂಮಿಯ ಮಾತಿನ ಲಾಹಿರೀ…
ಆ ಆ ಕೇಳಿರಿ ಭೂಮಿಯ ಮಾತಿನ ಲಾಹಿರೀ…
ಇಕಿ ಮಾನುತಾನು ಡೊನು ಬೂನು ಮಾನುತಾನು ಡೊನು ಬೂನು ಮಾನುತಾನು ಡೊನು ಬೂನುನಿ
ಇಕೀ. ಇಕೀ… ಇಕೀ ಮಾತಾಡೋ ಭೂಮಿ.
ಒಂದು ಮಾಮರಾ, ಮಾಮರದಗೊಂದು ಗುಬ್ಬಿ ಗೂಡು
ಗುಬ್ಬಿ ಗೂಡಾಗ ಮೂರೊತ್ತು ಕೇಳುತಿತ್ತು ಹಾಡು
ಮೂಖ ಮನಸ್ಸು ಅಂತಾರಾ ಮನಸ್ಸಾ ಮಾತ ಬಲ್ಲೋರು
ಆ… ಆ… ಆ… ಆ…
ಮೂಖ ಮನಸ್ಸು ಅಂತಾರಾ ಮನಸ್ಸಾ ಮಾತ ಬಲ್ಲೋರು
ಆ ಮೂಖ ಭಾಷೆಯಲ್ಲೇ ಈ ಹೂವು ನನ್ನ ಕರೆಯಿತು
ಹಸಿವೆ ಜೀವ ಅಂತಾರಾ ಹಸಿವ ನೋವ ಬಲ್ಲೋರು
ಏ. ಆ. ಆ. ಆ. ಆ…
ಹಸಿವೆ ಜೀವ ಅಂತಾರಾ ಹಸಿವ ನೋವ ಬಲ್ಲೋರು
ಆ ಜೀವದಿಂದ ನೋವ ಈ ಹೂವು ನೀಡಿ ನೀಗಿತು
ನೂರು ಜನ್ಮ. ನೂರು ಜನ್ಮ ಹಾಡಬೇಕು ಈ ಹೂವು ಋಣ ತಿರಲು
ಮುಂದೊಂದು ಜನ್ಮ ನಂಗೊಂತು ಬೇಕಾ
ಈ ಹೂವೇ ನನಗಾ ತಯಾಗಬೇಕಾ
ಆ ಆ ಕೇಳಿರಿ ಹೂವಿನ ಮನಸ್ಸಿನ ಲಾಹಿರೀ…
ಆ ಆ ಕೇಳಿರಿ ಹೂವಿನ ಮನಸ್ಸಿನ ಲಾಹಿರೀ…
ಈನುಹುನು ಐನು ದೈನು ಈನುಐನು ದೈನು ದೈನು ಹನು ದೈನು ಹನುರಿ
ಈ ಹೂವೇ.! ಈ ಹೂವೇ.! ಈ ಹೂವೇ ದೈವ ರೀ
ಚಿವ್ ಚಿವ ಚಿವ್ ಚಿವ ಚಿವ್ ಚಿವ ಗುಬ್ಬಿ ಗೂಡಲಿ ಚಿವ್ ಚಿವ್ವ
ಚಿವ್ ಚಿವ ಚಿವ್ ಚಿವ ಚಿವ್ ಚಿವ ಗುಬ್ಬಿ ಗೂಡಲಿ ಚಿವ್ ಚಿವ್ವ
ಚಿವ್ ಚಿವ ಚಿವ್ ಚಿವ ಚಿವ್ ಚಿವ ಗುಬ್ಬಿ ಗೂಡಲಿ ಚಿವ್ ಚಿವ್ವ
ಚಿವ್ ಚಿವ ಚಿವ್ ಚಿವ ಚಿವ್ ಚಿವ ಗುಬ್ಬಿ ಗೂಡಲಿ ಚಿವ್ ಚಿವ್ವ